ವೋಟರ್ ಐಡಿ ಕಾರ್ಡ್ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಮುಖ್ಯ ಗುರುತಿನ ದಾಖಲೆ. ಆದರೆ ಕೆಲವೊಮ್ಮೆ ಕಾರ್ಡ್‌ನಲ್ಲಿ ಇರುವ ಫೋಟೋ ನಮಗೆ ಇಷ್ಟವಾಗದೇ ಇರಬಹುದು ಅಥವಾ ಅದು ಹಳೆಯದಾಗಿರಬಹುದು. ಈಗ ಭಾರತೀಯ ಚುನಾವಣಾ ಆಯೋಗ ನೀಡಿರುವ ವಿಶೇಷ ಸೌಲಭ್ಯದಿಂದ, ನಿಮ್ಮ ಇಷ್ಟದ ಫೋಟೋವನ್ನು ಮನೆಯಲ್ಲಿಯೇ ಉಚಿತವಾಗಿ ಬದಲಾಯಿಸಬಹುದು.
ಈ ಪ್ರಕ್ರಿಯೆಯನ್ನು Voter Helpline App ಮೂಲಕ ಆನ್‌ಲೈನ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ಸುಲಭವಾಗಿ ಮಾಡಬಹುದು.
1. ಆನ್‌ಲೈನ್ ವಿಧಾನ (Voter Helpline App ಮೂಲಕ)
ಹಂತ | ವಿವರ |
---|---|
1 | Google Play Store ಅಥವಾ Apple App Store ನಲ್ಲಿ Voter Helpline App ಡೌನ್‌ಲೋಡ್ ಮಾಡಿ |
2 | ಆಪ್ ತೆರೆಯಿರಿ, Form 8 – Correction of Entries ಆಯ್ಕೆ ಮಾಡಿ |
3 | Let’s Start ಕ್ಲಿಕ್ ಮಾಡಿ, ನಿಮ್ಮ Voter ID ಸಂಖ್ಯೆ ನಮೂದಿಸಿ |
4 | ನಿಮ್ಮ ಹೆಸರು ಮತ್ತು ವಿಳಾಸ ತೋರಿದ ಬಳಿಕ, ಹೊಸ ಫೋಟೋ ಅಪ್‌ಲೋಡ್ ಮಾಡಿ (ಕ್ಯಾಮೆರಾ ಅಥವಾ ಗ್ಯಾಲರಿ ಮೂಲಕ) |
5 | Submit ಮಾಡಿದ ನಂತರ Reference ID ಸಿಗುತ್ತದೆ – ಇದನ್ನು ಟ್ರಾಕಿಂಗ್‌ಗೆ ಉಪಯೋಗಿಸಬಹುದು |
ಅಕ್ಕ ಕೆಫೆ ಅರ್ಜಿ ಆಹ್ವಾನ – ಸಂಕ್ಷಿಪ್ತ ಮಾಹಿತಿ ಇಲ್ಲಿದೆ, ಮಹಿಳೆಯರಿಗೆ ಉದ್ಯಮಾವಕಾಶ
2. ಆಫ್‌ಲೈನ್ ವಿಧಾನ
ಹಂತ | ವಿವರ |
---|---|
1 | Form 8 ಭರ್ತಿ ಮಾಡಿ – Correction of Entries for Voter ID |
2 | ಭರ್ತಿ ಮಾಡಿದ ಫಾರ್ಮ್ ಮತ್ತು ಹೊಸ ಫೋಟೋವನ್ನು Booth Level Officer (BLO) ಗೆ ನೀಡಿ |
3 | ಅವರು ಚುನಾವಣಾ ಆಯೋಗದ ಡೇಟಾಬೇಸ್‌ನಲ್ಲಿ ನಿಮ್ಮ ಫೋಟೋ ಅಪ್ಡೇಟ್ ಮಾಡುತ್ತಾರೆ |
ಟಿಪ್ಪಣಿ
- ಫೋಟೋ ಬದಲಾವಣೆ ಹೊಸ ಕಾರ್ಡ್ ತಗೊಳ್ಳುವಾಗ ಮಾತ್ರವಲ್ಲ, ಯಾವುದೇ ಸಮಯದಲ್ಲೂ ಮಾಡಿಸಬಹುದು
- ಪ್ರಕ್ರಿಯೆ ಸಂಪೂರ್ಣ ಉಚಿತ
- ಹೊಸ ಕಾರ್ಡ್‌ನ್ನು ಪೋಸ್ಟ್ ಮೂಲಕ ಅಥವಾ ಬೂತ್ ಮಟ್ಟದಲ್ಲಿ ಪಡೆಯಬಹುದು
ಅಗತ್ಯವಿರುವುದು
- ಮಾನ್ಯವಾದ ವೋಟರ್ ಐಡಿ ಸಂಖ್ಯೆ
- ಹೊಸ ಪಾಸ್‌ಪೋರ್ಟ್ ಸೈಸ್ ಫೋಟೋ (ಸ್ಪಷ್ಟ, ಹಿನ್ನಲೆ ಲೈಟ್ ಕಲರ್)
- ಆನ್‌ಲೈನ್ ವಿಧಾನಕ್ಕೆ – ಸ್ಮಾರ್ಟ್‌ಫೋನ್/ಇಂಟರ್ನೆಟ್ ಸಂಪರ್ಕ